Zero Hour/ಶೂನ್ಯವೇಳೆ ಪ್ರಸ್ತಾವಗಳು

137th Session/೧೩೭ನೇ ಅಧಿವೇಶನದ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ ಸೂಚನೆಗಳ ವಿವರಣಾ ಪಟ್ಟಿ
ಕ್ರ.ಸಂ ಸದಸ್ಯರ ಹೆಸರು ಸದನದಲ್ಲಿ ಚರ್ಚಿಸಿದ ದಿನಾಂಕ ವಿಷಯ ಷರಾ
01
ಎಂ.ಪಿ.ಸುನೀಲ್ ಸುಬ್ರಮಣಿ
13.02.2019
ಕೊಡಗು ಜಿಲ್ಲೆಯಲ್ಲಿ ಹೊಸದಾಗಿ ಒಂದು ತಾಲ್ಲೂಕನ್ನು ರಚಿಸಿ ಅದಕ್ಕೆ ಕಾವೇರಿ ತಾಲ್ಲೂಕು ಎಂದು ಹೆಸರಿಡುವ ಬಗ್ಗೆ.
ಸಂಬಂಧಪಟ್ಟ ಸಚಿವರಿಂದ ಉತ್ತರವನ್ನು ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
02
ಶರಣಪ್ಪ ಮಟ್ಟೂರು
13.02.2019
ರಾಜ್ಯದಲ್ಲಿ ಸರ್ವ ಶಿಕ್ಷಣ ಅಭಿಯಾನ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಗಳಡಿಯಲ್ಲಿ ಆಯ್ಕೆಯಾಗಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ಎಂಟು ತಿಂಗಳಿನಿಂದ ಹಾಗೂ ಕಲಬುರಗಿ ವಿಭಾಗದ ಪ್ರೌಢಶಾಲಾ ಶಿಕ್ಷಕರಿಗೆ ಮೂರು ತಿಂಗಳಿನಿಂದ ವೇತನ ಪಾವತಿಯಾಗದಿರುವ ಬಗ್ಗೆ.
ದಿನಾಂಕ:14.02.2019 ರಂದು ಉತ್ತರವನ್ನು ಮಂಡಿಸಲಾಯಿತು.
03
ಅರುಣ ಶಹಾಪೂರ
13.02.2019
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಯೋಗದಲ್ಲಿದ್ದ ಕೆಲ ಸದಸ್ಯರು ದೆಹಲಿಯಲ್ಲಿರುವ ಕರ್ನಾಟಕ ಭವನದಲ್ಲಿ ಮದ್ಯಪಾನ ಮಾಡಿ ಗಲಾಟೆ ಎಬ್ಬಿಸಿದ್ದು ಇದರಿಂದಾಗಿ ತಮಗೆ ತೊಂದರೆಯಾಗಿರುವುದೆಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಪೊಲೀಸ್ ಠಾಣೆಗೆ ದೂರು ನೀಡಿರುವ ಬಗ್ಗೆ ಪತ್ರಿಕೆಯಲ್ಲಿ ಪ್ರಕಟಗೊಂಡಿರವ ಕುರಿತು.
ಸಂಬಂಧಪಟ್ಟ ಸಚಿವರಿಂದ ಉತ್ತರವನ್ನು ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
04
ಕವಟಗಿಮಠ ಮಹಾಂತೇಶ್
ಮಲ್ಲಿಕಾರ್ಜುನ
13.02.2019
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿಭಜನೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ವಿಷಯದ ಬಗ್ಗೆ.
ಸಂಬಂಧಪಟ್ಟ ಸಚಿವರಿಂದ ಉತ್ತರವನ್ನು ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
05
ಬಸವರಾಜ ಶಿವಲಿಂಗಪ್ಪ ಹೊರಟ್ಟಿ
13.02.2019
ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಯೋಜನೆಯಡಿಯಲ್ಲಿ ರಾಜಾದ್ಯಂತ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ಹಾಗೂ ಒಳಗುತ್ತಿಗೆ ನೌಕರರಗಳ ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರ ನಡೆಸುತ್ತಿರುವ ಬಗ್ಗೆ.
ಸಂಬಂಧಪಟ್ಟ ಸಚಿವರಿಂದ ಉತ್ತರವನ್ನು ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
06
ಎಸ್.ವ್ಹಿ. ಸಂಕನೂರ
13.02.2019
ಹುಬ್ಬಳ್ಳಿ-ಧಾರವಾಡ ಹಾಗೂ ಇನ್ನಿತರೆ ಜಿಲ್ಲೆಗಳಲ್ಲಿಯ ಅನುದಾನಿತ ಶಿಕ್ಷಣ ಸಂಸ್ಥೆಗಳ ಪ್ರಾಥಮಿಕ ಶಾಲಾ ಶಿಕ್ಷಕರ ವೇತನ ಬಿಡುಗಡೆಯಾಗದಿರುವ ಕುರಿತು.
ದಿನಾಂಕ:14.02.2019 ರಂದು ಉತ್ತರವನ್ನು ಮಂಡಿಸಲಾಯಿತು.

BACK