Budget Discussion/ವಿತ್ತೀಯ ಕಾರ್ಯಕಲಾಪಗಳು

Session /ಅಧಿವೇಶನ Budget Discussion/ವಿತ್ತೀಯ ಕಾರ್ಯಕಲಾಪಗಳು
139th 139th Session/೧೩೯ನೇ ಅಧಿವೇಶನ
01. ದಿನಾಂಕ: 10.10.2019 ರಂದು ಮಾನ್ಯ ಮುಖ್ಯ ಮಂತ್ರಿಯವರ ಪರವಾಗಿ ಮಾನ್ಯ ಸಭಾನಾಯಕರು ಭಾರತ ಸಂವಿಧಾನದ 151(2)ನೇ ಅನುಚ್ಛೇದದ ಮೇರೆಗೆ 2017-18ನೇ ಸಾಲಿನ ಧನವಿನಿಯೋಗ ಹಾಗೂ ಹಣಕಾಸು ಲೆಕ್ಕಗಳು(ಸಂಪುಟ 1 ಮತ್ತು 2ನ್ನು) ಮಂಡಿಸಿದರು.

02. ದಿನಾಂಕ: 11.02.2019 ರಂದು ಮಾನ್ಯ ಮುಖ್ಯ ಮಂತ್ರಿಯವರ ಪರವಾಗಿ ಮಾನ್ಯ ಸಭಾನಾಯಕರು 2019-20ನೇ ಸಾಲಿನ ರಾಜ್ಯ ಹಣಕಾಸಿನ ಮಧ್ಯವಾರ್ಷಿಕ ಪರಿಶೀಲನಾ ವರದಿಯನ್ನು ಮಂಡಿಸಿದರು.

03. ದಿನಾಂಕ: 12.10.2019 ರಂದು ಶ್ರೀ ಬಿ. ಎಸ್‌. ಯಡಿಯೂರಪ್ಪ(ಮಾನ್ಯ ಮುಖ್ಯ ಮಂತ್ರಿಗಳು ಹಾಗೂ ಹಣಕಾಸು ಸಚಿವರು), ಅವರು 2019-20ನೇ ಸಾಲಿನ ಪೂರಕ ಅಂದಾಜುಗಳನ್ನು (ಎರಡನೇ ಕಂತು) ಮಂಡಿಸಿದರು.

138th 138th Session/೧೩೮ನೇ ಅಧಿವೇಶನ

ದಿನಾಂಕ: 27.09.2019 ರಂದು ಶ್ರೀ ಬಿ. ಎಸ್‌. ಯಡಿಯೂರಪ್ಪ(ಮಾನ್ಯ ಮುಖ್ಯ ಮಂತ್ರಿಗಳು ಹಾಗೂ ಹಣಕಾಸು ಸಚಿವರು), ಅವರು 2019-20ನೇ ಸಾಲಿನ ಪೂರಕ ಅಂದಾಜುಗಳನ್ನು(ಮೊದಲನೇ ಕಂತು) ಸಭೆಯ ಮುಂದೆ ಮಂಡಿಸಿದರು.

137th
137th Session/೧೩೭ನೇ ಅಧಿವೇಶನ
01. ದಿನಾಂಕ: 08.02.2019 ರಂದು ಶ್ರೀ ಹೆಚ್. ಡಿ. ಕುಮಾರಸ್ವಾಮಿ (ಮಾನ್ಯ ಮುಖ್ಯ ಮಂತ್ರಿಗಳು ಹಾಗೂ ಹಣಕಾಸು ಸಚಿವರು), ಅವರು 2019-20ನೇ ಸಾಲಿನ ಆಯವ್ಯಯ ಅಂದಾಜುಗಳನ್ನು ಸದನದಲ್ಲಿ ಮಂಡಿಸಿದರು.

02. ದಿನಾಂಕ: 13.02.2019 ರಂದು ಭಾರತ ಸಂವಿಧಾನ 205(1)(ಎ)ರ ಅನುಚ್ಛೇದದ ಮೇರೆಗೆ 2018-19ನೇ ಸಾಲಿನ ಪೂರಕ ಅಂದಾಜುಗಳನ್ನು (ಎರಡನೇ ಕಂತು) ಮಾನ್ಯ ಸಭಾನಾಯಕರು ಸದನಕ್ಕೆ ಒಪ್ಪಿಸಿದರು.
136th
136th Session/೧೩೬ನೇ ಅಧಿವೇಶನ
ದಿನಾಂಕ: 14.12.2018 ರಂದು 2018-19ನೇ ಸಾಲಿನ ರಾಜ್ಯ ಹಣಕಾಸಿನ ಮಧ್ಯ ವಾರ್ಷಿಕ ಪರಿಶೀಲನಾ ವರದಿಯನ್ನು ಹಾಗೂ ಭಾರತ ಸಂವಿಧಾನ 205(1)(ಎ)ರ ಅನುಚ್ಛೇದದ ಮೇರೆಗೆ 2018- 19ನೇ ಸಾಲಿನ ಪೂರಕ ಅಂದಾಜುಗಳನ್ನು (ಮೊದಲನೇ ಕಂತನ್ನು) ಮಾನ್ಯ ಸಭಾನಾಯಕರು ಸದನಕ್ಕೆ
ಒಪ್ಪಿಸಿದರು.
135th
135th Session/೧೩೫ನೇ ಅಧಿವೇಶನ
ದಿನಾಂಕ: 05.07.2018ರಂದು ಶ್ರೀ ಹೆಚ್. ಡಿ. ಕುಮಾರಸ್ವಾಮಿ (ಮಾನ್ಯ ಮುಖ್ಯಮಂತ್ರಿಗಳು ಹಾಗೂ ಹಣಕಾಸು ಸಚಿವರು), ಅವರ ಪರವಾಗಿ ಮಾನ್ಯ ಸಭಾನಾಯಕರು 2018-19ನೇ ಸಾಲಿನ ಆಯವ್ಯಯ ಅಂದಾಜುಗಳನ್ನು ಸದನದಲ್ಲಿ ಮಂಡಿಸಿದರು.

BACK