ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
ಶ್ರೀ ಕೆ.ಬಿ.ಶಾಣಪ್ಪಾ
ಕ್ಷೇತ್ರ    : ನಾಮನಿರ್ದೇಶನ ಹೊಂದಿದವರು
ಪಕ್ಷ     : ಭಾರತೀಯ ಜನತಾ ಪಾರ್ಟಿ (ಭಾ.ಜ.ಪ)
ಇ-ಮೇಲ್ ವಿಳಾಸ : -
ತಂದೆಯ ಹೆಸರು ದಿ.ಭೀಮಶಾ ಕಮಲರ
ತಾಯಿಯ ಹೆಸರು -
ಜನ್ಮ ದಿನಾಂಕ 16-05-1938
ಜನ್ಮ ಸ್ಥಳ ಶಾಹಬಾದ್
ವಿವಾಹಿತರೆ ವಿವಾಹಿತರು
ಪತ್ನಿಯ ಹೆಸರು ಶ್ರೀಮತಿ ಜಮಲಾ
ಮಕ್ಕಳು ಗಂಡು - 02
ಹೆಣ್ಣು - 02
ವಿದ್ಯಾರ್ಹತೆ ಎಂ.ಎ. (ರಾಜಕೀಯ ಶಾಸ್ತ್ರ)
ವೃತ್ತಿ ಸಮಾಜ ಸೇವೆ
ಖಾಯಂ ವಿಳಾಸ
"ಗುಡಿಸ್ಮೃತಿ" ಮನೆ ನಂ.10-105/9, ಶರಣ ನಗರ, ಬ್ರಹ್ಮಪುರ,
ಬ್ರಹ್ಮಪುರ, ಗುಲಬರ್ಗಾ-585103
ದೂರವಾಣಿ ಸಂಖ್ಯೆ. (08472) 223434. (ಮೊ) 9448434467 ಮತ್ತು 7259379333
ಈಗಿನ ವಿಳಾಸ
ಕೊಠಡಿ ಸಂಖ್ಯೆ: 029, ಶಾ.ಭ. ಬೆಂಗಳೂರು
ಹೊಂದಿರುವ ಸ್ಥಾನಮಾನಗಳು

10-08-2012 ರಿಂದ 09-08-2018

1960

 

1991-92

1960-1963

1962-1963

1983-85

 

1985-1989

 

1992-96

ಜನವರಿ 1996 ರಿಂದ ಜೂನ್ 1996

ಜೂನ್ 1996 ರಿಂದ ಡಿಸೆಂಬರ್ 1996

 

ಡಿಸೆಂಬರ್ 1996 ರಿಂದ ಡಿಸೆಂಬರ್ 2002

2004-2006

 

ಏಪ್ರಿಲ್ 2006 ರಿಂದ ಏಪ್ರಿಲ್ 2012

ಮೇ 2006 ರಿಂದ

ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು

ಭಾರತೀಯ ಕಮ್ಯುನಿಸ್ಟ್ ಪಕ್ಷ (ಸಿ.ಪಿ.ಐ) ವನ್ನು ಸೇರಿಕೊಳ್ಳುವ ಮೂಲಕ ರಾಜಕೀಯ ಜೀವನ ಪ್ರಾರಂಭ ಮತ್ತು 1992ರ ವರೆಗೂ ಈ ಪಕ್ಷದ ಸದಸ್ಯರಾಗಿರುತ್ತಾರೆ.

ಸದಸ್ಯರು, ಸಿ.ಪಿ.ಐ ನ ರಾಷ್ಟ್ರೀಯ ಮಂಡಳಿ

ಗುಲ್ಬರ್ಗಾ ಜಿಲ್ಲೆಯ ಶಾಹಬಾದದ ಎಸಿಸಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ

ಎವ್ಹಿಬಿ, ಶಾಹಬಾದ, ಗುಲ್ಬರ್ಗಾದಲ್ಲಿ ದ್ವಿತೀಯ ದರ್ಜೆಯ ಸಹಾಯಕರಾಗಿ ಸೇವೆ.

ಸಿಪಿಐ ಪಕ್ಷದಿಂದ ಕರ್ನಾಟಕ ವಿಧಾನ ಸಭೆಯ ಸದಸ್ಯರಾಗಿ ಶಾಹಬಾದ ಮತಕ್ಷೇತ್ರದಿಂದ ಚುನಾಯಿತ

ಸಿಪಿಐ ಪಕ್ಷದಿಂದ ಕರ್ನಾಟಕ ವಿಧಾನ ಸಭೆಯ ಸದಸ್ಯರಾಗಿ ಶಾಹಬಾದ್ ಮತಕ್ಷೇತ್ರದಿಂದ ಪುನರಾಯ್ಕೆ ಗುಲ್ಬರ್ಗಾ ವಿಶ್ವವಿದ್ಯಾನಿಲಯ, ಗುಲ್ಬರ್ಗಾದ ಸಿಂಡಿಕೇಟ್, ಸೆನೆಟ್ ಮತ್ತು ಶೈಕ್ಷಣಿಕ ಮಂಡಳಿಯ ಸದಸ್ಯರಾಗಿ ಸೇವೆ.

ರಾಜ್ಯ ಜನತಾ ದಳ ಸಂಸದೀಯ ಮಂಡಳಿ ಅಧ್ಯಕ್ಷರಾಗಿ ಸೇವೆ.

ಅಧ್ಯಕ್ಷರು, ಕರ್ನಾಟಕ ಪ.ಜಾ/ಪ.ಪಂ.ಗಳ ಅಭಿವೃದ್ಧಿ ನಿಗಮ, ಕರ್ನಾಟಕ ಸರ್ಕಾರ

ಶ್ರೀ ಜೆ.ಹೆಚ್.ಪಟೇಲ್ ಮಂತ್ರಿಮಂಡಲದಲ್ಲಿ ಸಂಪುಟ ದರ್ಜೆಯ ಅಬಕಾರಿ ಸಚಿವರಾಗಿ ಸೇವೆ

 

ನಾಮ ನಿರ್ದೇಶನ ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು

ಕರ್ನಾಟಕ ರಾಜ್ಯದ ಬಿಜೆಪಿಯ ಉಪಾಧ್ಯಕ್ಷರು ಬಿ.ಜೆ.ಪಿ.ಯ ರಾಷ್ಟ್ರೀ ಪ.ಜಾ. ಯ ಮೋರ್ಚಾದ ಉಪಾಧ್ಯಕ್ಷರು

 

ರಾಜ್ಯ ಸಭಾ ಸದಸ್ಯರಾಗಿ (ಬಿಜೆಪಿ) ಚುನಾಯಿತ

ಸದಸ್ಯರು, ಕೇಂದ್ರೀಯ ರೇಷ್ಮೆ ಮಂಡಳಿ ಸದಸ್ಯರು, ರಕ್ಷಣಾ ಸಮತಿ

ಸದಸ್ಯರು, ಅಧೀನ ಶಾಸನ ರಚನಾ ಸಮಿತಿ ಸದಸ್ಯರು ನೌಕಾ ಮಂಡಳಿ

ಸದಸ್ಯರು, ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಂಸತ್ತಿನ ಪ.ಜಾ/ಪ.ಪಂ. ಗಳ ಅಭಿವೃದ್ಧಿ ಸಮಿತಿಗೆ ಚುನಾಯಿತ.

ಹವ್ಯಾಸಗಳು ಪುಟ್ ಬಾಲ್, ಕಬಡ್ಡಿ ಮತ್ತು ಚೆಸ್, ವಾರ್ತಾ ಪತ್ರಿಕೆಗಳನ್ನು ಮತ್ತು ಸಾಂಸ್ಕೃತಿಕ, ರಾಜಕೀಯ ಮತ್ತು ಧಾರ್ಮಿಕ ಪುಸ್ತಕಗಳನ್ನು ಓದುವುದು.
ವಿದೇಶ ಬೇಟಿ ಯುಎಸ್ಎ, ಯುಕೆ, ಫ್ರಾನ್ಷ್, ಜರ್ಮನಿ, ಬೆಲ್ಜಿಯಂ, ಇಟಲಿ, ಸ್ವಿಜರ್ ಲ್ಯಾಂಡ್, ಹಾಲೆಂಡ್, ಯುಎಇ, ಯುಎಸ್ಎಸ್ಆರ್, ಇಸ್ಟೋನಿಯಾ, ನೇಪಾಳ ಮತ್ತು ಬಲ್ಗೇರಿಯಾ 1986ರಲ್ಲಿ ಡೆನ್ಮಾರ್ಕ್ ನ ಕೌಪನ್ ಹೇಗನ್ ನಲ್ಲಿ ನಡೆದ ಅಂತರರಾಷ್ಟ್ರೀಯ ಶಾಂತಿ ಮತ್ತು ಸೌಹಾರ್ದತಾ ಸಮ್ಮೇಳನದಲ್ಲಿ ಭಾಗಿ.
ಇತರೆ ಮಾಹಿತಿ

ಸಾಮಾಜಿಕ ಚಟುವಟಿಕೆಗಳು

1981ರಲ್ಲಿ ಎಬಿಎಲ್ ನ ಕೆಲಸಗಾರರಾಗಿ ಸಮಾನ ಮನಸ್ಕ ಉದ್ಯೋಗಿಗಳ ನೆರವಿನಿಂದ ನೃಪತುಂಗ ಗೃಹ ನಿರ್ಮಾಣ ಸಹಕಾರ ಸಂಘದ ಸ್ಥಾಪನೆ, 1981 ರಿಂದ 2008ರ ವರೆಗೆ ಅದರ ಅಧ್ಯಕ್ಷರಾಗಿ ಸೇವೆ ಮತ್ತು ಈ ಅವಧಿಯಲ್ಲಿ ಕರ್ನಾಟಕ ಸರ್ಕಾರದ ನೆರವಿನೊಂದಿಗೆ ಕಡಿಮೆ ವೆಚ್ಚದಲ್ಲಿ ಎಲ್ಲಾ ಸೌಕರ್ಯಗಳನ್ನು ಹೊಂದಿರುವ 200 ಮನೆಗಳ ನಿರ್ಮಾಣ, ಇದು ಕರ್ನಾಟಕ ರಾಜ್ಯದಲ್ಲಿ ವಿಶಿಷ್ಟವಾದುದಾಗಿದೆ.

1957ನೇ ವರ್ಷದಲ್ಲಿ ಗುಲ್ಬರ್ಗಾದಿಂದ ರಾಜಪುರದವರೆಗಿನ ರಸ್ತೆ ನಿರ್ಮಾಣಕ್ಕಾಗಿ ಗುಲ್ಬರ್ಗಾದಲ್ಲಿ ಆಯೋಜಿಸಿದ್ದ, ರಾಷ್ಟ್ರಮಟ್ಟದಲ್ಲಿ ದಿವಂಗತ ಶ್ರೀ ಗುಲ್ಜಾರಿಲಾಲ್ ನಂದಾ ಅವರು ಮುಂದಾಳತ್ವ ವಹಿಸಿದ್ದ ಭಾರತ ಸೇವಾ ಸಮಾಜ ಶಿಬಿರದಲ್ಲಿ ವಿದ್ಯಾರ್ಥಿ ದೆಸೆಯಲ್ಲಿ ಭಾಗಿ.

1959ರಲ್ಲಿ ಲೋಕಸಾಹಿಕ್ ಸೇನೆಯಿಂದ ಸರಡಗಿ ಗ್ರಾಮದಲ್ಲಿ ಆಯೋಗಿಸಲಾಗಿದ್ದ ಶಿಬಿರದಲ್ಲಿ ಒಂದು ತಿಂಗಳ ಸೇನಾ ತರಬೇತಿ

1963ರಲ್ಲಿ ದಿವಂಗತ ಡಾ:ಮೋದಿ ಅವರು ಶಾಹಬಾದಿನಲ್ಲಿ ಏರ್ಪಡಿಸಿದ್ದ ಉಚಿತ ನೇತ್ರಾ ಶಿಬಿರದಲ್ಲೂ ಸ್ವಯಂ ಸೇವಕರಾಗಿ ಸೇವೆ.

ಎಬಿಎಲ್ ನಲ್ಲಿ ಕೆಲಸಗಾರರಾಗಿ ಟ್ರೇಡ್ ಯುನಿಯನ್ ಚಳುವಳಿಯ ಸಂಘಟನೆ ಮತ್ತು ಆ ಯುನಿಯನ್ ನ ಅಧ್ಯಕ್ಷ ಮತ್ತು ಎಸಿಸಿ ಕೆಲಸಗಾರರ ಯೂನಿಯನ್ ವಾಡಿಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ, ಸಿಸಿಐ, ಕಲ್ಲಿದ್ದಲು ಮತ್ತು ಸಿಮೆಂಟ್ ಲೋಡಿಂಗ್ ಗುತ್ತಿಗೆ ಕೆಲಸಗಾರರ ಯೂನಿಯನ್ ನಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಕರ್ನಾಟಕ ಶಾಖೆಯ ಎಐಟಿಯುಸಿನ ಉಪಾಧ್ಯಕ್ಷರಾಗಿ ಸೇವ.

1974ರಲ್ಲಿ ಅಂದಿನ ಯೂನಿಯನ್ ನೇತೃತ್ವದಲ್ಲಿ ಸಂಬಳಕ್ಕಾಗಿ ಎಬಿಎಲ್ ಕೆಲಸಗಾರರು 74 ದಿನ ನಿರಂತರವಾಗಿ ನಡೆಸಿದ ಐತಿಹಾಸಿಕ ಮುಷ್ಕರದಲ್ಲಿ ಭಾಗವಹಿಸಿದ್ದಕ್ಕಾಗಿ ಎಬಿಎಲ್ ನ ಆಡಳಿತ ಮಂಡಳಿ ಇವರನ್ನು ಹಾಗೂ ಇನ್ನಿತರೆ ಮೂರು ಕೆಲಸಗಾರರನ್ನು ವಜಾ ಮಾಡಿತು. ಮತ್ತೆ 1977ರಲ್ಲಿ ಅವರನ್ನು ಪುನಃ ಕೆಲಸಕ್ಕೆ ತೆಗೆದುಕೊಳ್ಳಲಾಯಿತು.

 

 

Top