<%@ Page Language="VB" AutoEventWireup="false" CodeFile="Kan_Venkatesh.aspx.vb" Inherits="Kan_Venkatesh" %> Untitled Page
ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
ಶ್ರೀ ರಾಮಚಂದ್ರಗೌಡ
ಕ್ಷೇತ್ರ    : ಪದವೀಧರರ ಕ್ಷೇತ್ರ
ಪಕ್ಷ     : ಭಾರತೀಯ ಜನತಾ ಪಾರ್ಟಿ (ಭಾ.ಜ.ಪ)
ಇ-ಮೇಲ್ ವಿಳಾಸ : -
ತಂದೆಯ ಹೆಸರು ಶ್ರೀ ಜೆ. ವೆಂಕಟಪ್ಪ
ತಾಯಿಯ ಹೆಸರು -
ಜನ್ಮ ದಿನಾಂಕ 13-12-1938
ಜನ್ಮ ಸ್ಥಳ ತಿಪಟೂರು, ಕುಣಿಗಲ್ ತಾಲ್ಲೂಕು, ತುಮಕೂರು ಜಿಲ್ಲೆ
ವಿವಾಹಿತರೆ ವಿವಾಹಿತರು
ಪತ್ನಿಯ ಹೆಸರು ಶ್ರೀಮತಿ ಯಶೋಧ
ಮಕ್ಕಳು ಗಂಡು-01
ಹೆಣ್ಣು-01
ವಿದ್ಯಾರ್ಹತೆ ಬಿ.ಎಸ್ಸಿ., ಬಿ.ಇ., ಎಫ್.ಐ.ಇ.,
ವೃತ್ತಿ ಇಂಜಿನಿಯರ್ ಮತ್ತು ವ್ಯವಸಾಯ
ಖಾಯಂ ವಿಳಾಸ
ನಂ.9, "ಐಸಿರಿ", 21ನೇ ಅಡ್ಡರಸ್ತೆ,
8ನೇ ಮುಖ್ಯ ರಸ್ತೆ, 3ನೇ ಬ್ಲಾಕ್, 4ನೇ ಹಂತ,
ಬಸವೇಶ್ವರನಗರ, ಬೆಂಗಳೂರು-560079.
ದೂರವಾಣಿ ಸಂಖ್ಯೆ. (080) 23387544(R)
9448077544(ಮೊ)
ಈಗಿನ ವಿಳಾಸ (ಕಛೇರಿ)
ಉಪಾಧ್ಯಕ್ಷರು
ರಾಜ್ಯ ಯೋಜನಾ ಮಂಡಳಿ, ವಿಕಾಸಸೌಧ, ರೂ.ನಂ.36, ಬೆಂಗಳೂರು-560001.
ದೂರವಾಣಿ ಸಂಖ್ಯೆ. (080) 22034651, 22386063(O).
ಹೊಂದಿರುವ ಸ್ಥಾನಮಾನಗಳು : ಉಪಾಧ್ಯಕ್ಷರು, ರಾಜ್ಯ ಯೋಜನಾ ಮಂಡಳಿ
ಹೊಂದಿದ್ದ ಸ್ಥಾನಮಾನಗಳು : ಮಾಜಿ ವೈದ್ಯಕೀಯ ಸಚಿವರು
22-06-2006 ರಿಂದ 21-06-2012 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
1988-1944 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
1994-2000 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
2000-2006 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
1970-1983 ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯರು,
ಪ್ರಧಾನ ಕಾರ್ಯದರ್ಶಿ, ಬಿ.ಜೆ.ಪಿ.,
ಕರ್ನಾಟಕ ಸದಸ್ಯರು, ಸಿ.ಐ.ಟಿ.ಬಿ., ಬೆಂಗಳೂರು
ಹವ್ಯಾಸಗಳು.
ಈಜು, ನಾಟಕ ಮತ್ತು ಬೋಧನೆ
ಇತರೆ ಆಸಕ್ತಿ ವಿಷಯಗಳು :

1988-94 : ಚಲನಚಿತ್ರ ರಂಗದ ವಿವಿಧ ಕ್ಷೇತ್ರದಲ್ಲಿ ಐದು ಪ್ರಶಸ್ತಿಗಳನ್ನು ಮತ್ತು ಫಿಲ್ಮಿ ಸ್ಪಂದನ ಎಂಬ ಪ್ರಾಯೋಗಿಕ ಚಿತ್ರದ ನಿರ್ಮಾಣಕ್ಕಾಗಿ ಪ್ರಶಸ್ತಿ

1988-94 : ಉತ್ತಮ ಶಾಸಕ ಪ್ರಶಸ್ತಿ

ಇತರೆ ಮಾಹಿತಿ :
  1. ಭಾರತೀಯ ಜನತಾ ಪಕ್ಷದ ಸ್ಥಾಪಕ ಸದಸ್ಯರು.
  2. "ನೆಹರೂಜಿ ಅಬ್ ಕ್ಯಾಕರೆ-ಪೊಲೀಸ್ ಲೇಕರ್ ಗೋವಾ ಚಲೋ" ಎಂಬ ಘೋಷಣೆಯೊಂದಿಗೆ ಪ್ರೌಢಶಾಲೆ ವಿದ್ಯಾರ್ಥಿಯಾಗಿದ್ದಾಗ ಗೋವಾ ವಿಮೋಚನಾ ಚಳವಳಿಯಲ್ಲಿ ಭಾಗವಹಿಸಿದ್ದಾರೆ.
  3. ಹಿಂದಿನ 'ಭಾರತೀಯ ಜನಸಂಘ'ದ ಸಂಘಟನೆ ಕಾರ್ಯ ಹಾಗೂ ಚಟುವಟಿಕೆಗಳಲ್ಲಿ ಸಕ್ರಿಯ ಪಾತ್ರ.
  4. 1970ರಲ್ಲಿ ಭಾರತೀಯ ಜನಸಂಘದಿಂದ ಬೆಂಗಳೂರು ಮಹಾನಗರ ಪಾಲಿಕೆಗೆ ಸದಸ್ಯರಾಗಿ ಆಯ್ಕೆ. ಬೆಂಗಳೂರಿನ ಪೈಪ್ ಲೈನ್  ಬಡಾವಣೆಯನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಪಡಿಸಿದ್ದಕ್ಕಾಗಿ ಅಂದಿನ ರಾಜ್ಯಪಾಲರಾದ ಶ್ರೀ ವಿ.ವಿ.ಗಿರಿ ಅಮರು ತಮ್ಮ ಭಾಷಣದಲ್ಲಿ ಮೆಚ್ಚುಗೆ ಸೂಚಿಸಿದ್ದರು. ಮಹಾನಗರ ಪಾಲಿಕೆಯ ಸದಸ್ಯರಾಗಿದ್ದ ಅವರನ್ನು ಸ್ಥಳೀಯ ಇತರ ರಾಜಕೀಯ ಪಕ್ಷದವರಿಂದ ಸನ್ಮಾನಿಸಲಾಯಿತು.
  5. ಬೆಂಗಳೂರು ನಗರವು ಸೂಕ್ತ ರೀತಿಯಲ್ಲಿ ಅಭಿವೃದ್ಧಿ ಹೊಂದುವಲ್ಲಿ ಯಶಸ್ಸು ಪಡೆದುಕೊಂಡ ಬೆಂಗಳೂರಿನ ನಗರಾಭಿವೃದ್ಧಿ ಮಂಡಳಿಗೆ ಸದಸ್ಯರಾಗಿ ಆಯ್ಕೆ. ಬಡಾವಣೆಗಳನ್ನು ಯೋಜಿತವಾಗಿ ನಿರ್ಮಾಣವಾಗುವಂತೆ ಮಾಡಿದರು ಮತ್ತು ನಿವೇಶನಗಳನ್ನು ಕೋರಿದ ಅನೇಕ ಅರ್ಹ ಅರ್ಜಿದಾರರಿಗೆ ನಿವೇಶನಗಳನ್ನು ಮಂಜೂರು ಮಾಡಿದ ಹೆಗ್ಗಳಿಕೆಗೆ ಪಾತ್ರ.
  6. ತುರ್ತು ಪರಿಸ್ಥಿತಿ ಅವಧಿಯಲ್ಲಿ ತಮ್ಮ ವಿವಾಹದ ದಿನದಿಂದಲೇ ಭೂಗತ ಚಟುವಟಿಕೆಗಳನ್ನು ಆರಂಭಿಸಿದರು.
  7. ಮಿಂಟೋ ಆಸ್ಪತ್ರೆಯ ಸಲಹಾ ಸಮಿತಿಯ ಸದಸ್ಯರಾಗಿ ಆಯ್ಕೆ. ಬಡಜನತೆಯ ಸಮಸ್ಯೆಗಳನ್ನು ಅರಿತುಕೊಂಡು ರೆಡ್ ಕ್ರಸ್ ಸಂಸ್ಥೆಯ ಸಹಕಾರದೊಂದಿಗೆ ಮಿಂಟೋ ಕಣ್ಣಿನ ಆಸ್ಪತ್ರೆಯ ಆವರಣದ ಒಳಗೆ ಲಾಭ ನಷ್ಟ ರಹಿತ ವ್ಯಾಪಾರದ ಆಧಾರದ ಮೇಲೆ ಕನ್ನಡಕಗಳ ಕೇಂದ್ರವನ್ನು ತೆರೆದರು.
  8. ಬೆಂಗಳೂರಿನಲ್ಲಿ ಗೃಹ ತೆರಿಗೆಯನ್ನು ವೈಜ್ಞಾನಿಕವಾಗಿ ವಿಧಿಸುವುದಕ್ಕೆ ಕುರಿತಂತೆ ನೀಲ ನಕ್ಷೆಯೊಂದನ್ನು ತಯಾರಿಸಿದರು ಮತ್ತು ಅದರ ಜಾರಿಗಾಗಿ 9 ದಿನಗಳವರೆಗೆ ನಿರಂತರವಾಗಿ ಸತ್ಯಾಗ್ರಹ ಕೈಗೊಂಡು ಯಶಸ್ವಿಯಾಗಿರುತ್ತಾರೆ.
  9. ರಾಜ್ಯಕ್ಕೆ ಬಹುರಾಷ್ಟ್ರೀಯ ಕಂಪನಿಯಾದ ಕೊಜೆಂಟ್ರಿಕ್ ನ ಜೊತೆಗಿನ ಒಪ್ಪಂದದಲ್ಲಾದ ಅನ್ಯಾಯವನ್ನು ಅಧ್ಯಯನ ಮಾಡಿದ ಪ್ರಥಮ ವ್ಯಕ್ತಿಯಾಗಿದ್ದಾರೆ ಮತ್ತು ಅದನ್ನು ಸರ್ಕಾರ ಪುನರ್ ಪರಿಶೀಲಿಸುವಂತೆ ಮಾಡಿದರು.
  10. ವಿಧಾನ ಪರಿಷತ್ತಿನ ಸಭಾಪತಿಯ ಪ್ಯಾನಲ್ ನ ಸದಸ್ಯರಾಗಿದ್ದು, ಸಭಾಪತಿ ಮತ್ತು ಉಪ ಸಭಾಪತಿಯವರ ಅನುಪಸ್ಥಿತಿಯಲ್ಲಿ ವಿಧಾನ ಪರಿಷತ್ತಿನ ಕಾರ್ಯಕಲಾಪಗಳ ನಿರ್ವಹಣೆ ಮತ್ತು ವಿಧಾನ ಪರಿಷತ್ತಿನ 88ವರ್ಷಗಳ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಕಾರ್ಯಕಲಾಪಗಳನ್ನು ಉತ್ತಮವಾಗಿ ನಡೆಸಿಕೊಟ್ಟ ಬಗ್ಗೆ ಎಲ್ಲಾ ಪಕ್ಷಗಳ ಸದಸ್ಯರಿಂದ ಮತ್ತು ವೃತ್ತ ಪತ್ರಿಕೆಗಳಿಂದ ಪ್ರಶಂಸೆಗಳಿಸಿ ಹೊಸ ದಾಖಲೆಯನ್ನು ಸೃಷ್ಟಿಸಿದರು.
  11. ಕಾವೇರಿ ನದಿ ನೀರಿನ ವಿವಾದದ ಸಂದರ್ಭದಲ್ಲಿ ರಾಜ್ಯದ ನೀತಿಯನ್ನು ಕುರಿತು ಸರ್ಕಾರದ ಜೊತೆಗಿದ್ದು, ನದಿ ಪಾತ್ರದಲ್ಲಿ ಬತ್ತಿ ಹೋಗುತ್ತಿರುವ ಕೆರೆಗಳ ಪುನರುಜ್ಜೀವನಕ್ಕಾಗಿ ಹೋರಾಟ ಮತ್ತು ಕೆರೆಗಳ ಪುನರುಜ್ಜೀವನ ಕಾರ್ಯದಲ್ಲಿ ಯಶಸ್ವಿಯಾದರು.

 

Top